ಜೆನ್ನಿಫರ್ ಶ್ರಾಡರ್ ಲಾರೆನ್ಸ್ ಒಬ್ಬ ಅಮೇರಿಕನ್ ನಟಿ . ಅವರು ೨೦೧೫ ಮತ್ತು ೨೦೧೬ ರಲ್ಲಿ ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ನಟಿ. == ಆರಂಭಿಕ ಜೀವನ == ಜೆನ್ನಿಫರ್ ಶ್ರಾಡರ್ ಲಾರೆನ್ಸ್ ಅವರು ಆಗಸ್ಟ್ ೧೫, ೧೯೯೦ ರಂದು ಯು.ಎಸ್.ಎ ಯಲ್ಲಿನ ಇಂಡಿಯನ್ ಹಿಲ್ಸ್, ಕೆಂಟುಕಿ ಯಲ್ಲಿ ಜನಿಸಿದರು. ಅವರು ೧೪ ನೇ ವಯಸ್ಸಿನಲ್ಲಿ ವೇದಿಕೆಯಲ್ಲಿ ನಟಿಸಲು ಪ್ರಾರಂಭಿಸಿದರು. == ನಟನೆ == ಜೆನ್ನಿಫರ್ ೨೦೧೨ ರ ಹಾರರ್ ಚಲನಚಿತ್ರವಾದ ಹೌಸ್ ಅಟ್ ದಿ ಎಂಡ್ ಆಫ್ ದಿ ಸ್ಟ್ರೀಟ್‌ನಲ್ಲಿ ಅಲಿಸ್ಸಾ ಎಂಬ ಹುಡುಗಿಯಾಗಿ ನಟಿಸಿದರು. ಲಾರೆನ್ಸ್ ಅದೇ ವರ್ಷ ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್ ನಲ್ಲಿ ನಟಿಸಿದರು, ಅದಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ದೊರಕಿತು. ೨೦೧೬ ರಲ್ಲಿ, ಲಾರೆನ್ಸ್ ರೊಮ್ಯಾಂಟಿಕ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ ಪ್ಯಾಸೆಂಜರ್ಸ್ ನಲ್ಲಿ ನಟಿಸಿದರು. ಅವರು ೨೦೧೮ ರಲ್ಲಿ ರೆಡ್ ಸ್ಪ್ಯಾರೋ ಎಂಬ ಥ್ರಿಲ್ಲರ್ ಚಲನಚಿತ್ರದಲ್ಲಿ ನಟಿಸಿದರು. == ವೈಯಕ್ತಿಕ ಜೀವನ == ೨೦೧೪ ರಲ್ಲಿ, ಜೆನ್ನಿಫರ್ ಲಾರೆನ್ಸ್ ಮತ್ತು ಹಲವಾರು ಇತರ ಮಹಿಳಾ ಸೆಲೆಬ್ರಿಟಿಗಳ ಡಜನ್ಗಟ್ಟಲೆ ನಗ್ನ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್ನಲ್ಲಿ ಸೋರಿಕೆಯಾದವು. ಇದರ ಕುರಿತು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಸೋರಿಕೆಯು 'ಲೈಂಗಿಕ ಅಪರಾಧ' ಮತ್ತು 'ಲೈಂಗಿಕ ಹಿಂಸೆ' ಎಂದು ಜೆನ್ನಿಫರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ೨೦೧೮ ರಲ್ಲಿ, ಲಾರೆನ್ಸ್ ಆರ್ಟ್ ಗ್ಯಾಲರಿ ನಿರ್ದೇಶಕ ಕುಕ್ ಮರೋನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಫೆಬ್ರವರಿ ೨, ೨೦೧೯ ರಲ್ಲಿ ನಿಶ್ಚಿತಾರ್ಥ ಮತ್ತು ಅದೇ ವರ್ಷದ ಅಕ್ಟೋಬರ್‌ನಲ್ಲಿ ವಿವಾಹವಾದರು. == ಚಲನಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಲಾರೆನ್ಸ್